
ಕೆಲಸ ಎಂಬ ಕ್ಯಾಪಿಟಲಿಸ್ಟಿಕ್ ಪ್ರಪಂಚದ ಭೂತ
ನಮ್ಮ ಮನೆ ಹತ್ರ ಇರೋ ಒಬ್ಬ ಕಾರ್ ಮೆಕ್ಯಾನಿಕ್ ಹತ್ರ ಮಾತಾಡ್ತಾ ಇದ್ದೆ. ಪರಿಚಯ ಮಾಡಿಕೊಳ್ಳುತ್ತಾ ನೀನು ಎಲ್ಲಿ ಕೆಲ್ಸ ಮಾಡ್ತೀಯಾ, ಹೇಗೆ ಅಂತ ಕೇಳಿದ.
ಅದಕ್ಕೆ ನಾನು ಟೆಕ್ನಾಲಜಿಯಲ್ಲಿ ಒಂದು ದೊಡ್ಡ ಕಂಪನಿಯಲ್ಲಿ ಕೆಲ್ಸ ಮಾಡ್ತೀನಿ ಅಂತ ಅಂದ್ರೆ.
ಅವನು, ಇತ್ತೀಚೆಗೆ ಮಾಸ್ ಲೇ ಆಫ಼್ ಆಗಿರೋ ನ್ಯೂಸ್ ಅನ್ನು ಕೋಟ್ ಮಾಡಿ, ಅದು ಹೇಗೆ ಕೆಲ್ಸ ಮಾಡ್ತೀರೋ? ಅಂತ ಆಶ್ಚರ್ಯ ವ್ಯಕ್ತ ಪಡಿಸಿದ.
ನನಗೆ ಆಗಲೇ ಅನ್ನಿಸಿದ್ದು, ಹೌದು, ನಮ್ಮ ಕೆಲಸ ಇದೆ/ಇಲ್ಲ ಎನ್ನುವ ಯಾವ ಗ್ಯಾರಂಟಿ ಅಂತೂ ಇಲ್ಲ.